Indian National Congress - Karnataka - 1791151677796053

Download MP4 SD 1.46MB
  • QR code for mobile device to download SD video

ಸಾಹಸ ಕ್ರೀಡೆಗಳಿಗೆ ಸರ್ಕಾರದಿಂದ ಉತ್ತೇಜನ ಕಾಳಿ ಕಯಾಕಿಂಗ್‌ ಉತ್ಸವಕ್ಕೆ ಸಚಿವರ ಚಾಲನೆ
ಚಾಲನೆ

ರಾಜ್ಯದಲ್ಲಿ ಸಾಹಸ ಕ್ರೀಡೆಗಳನ್ನು ಉತ್ತೇಜಿಸಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017–18ನೇ ಸಾಲಿನಲ್ಲಿ ಹಲವಾರು ಸಾಹಸ ಕ್ರೀಡೆಗಳನ್ನು ಆಯೋಜಿಸಿದ್ದು, ಅವುಗಳಲ್ಲಿ ಕಾಳಿ ಕಯಾಕಿಂಗ್‍ ಉತ್ಸವ ಮೊದಲನೆಯದು.

ಪ್ರವಾಸೋದ್ಯಮ ಹಾಗೂ ಸಾಹಸ ಕ್ರೀಡೆಗಳು ನಿಕಟವಾದ ಸಂಬಂಧ ಹೊಂದಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯು ₹ 3.50 ಕೋಟಿಯನ್ನು ಜನರಲ್‍ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ (ಜೇತ್ನಾ) ನೀಡಲಾಗಿದ್ದು, ಮುಂದಿನ 9 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಹತ್ತು ಸಾಹಸ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ’

ಕಾಳಿ ನದಿಯು ಅಣೆಕಟ್ಟೆಯಿಂದ ನಿಯಂತ್ರಣಗೊಂಡಿದ್ದು, ನೀರಿನ ಹರಿವು ಸದಾ ಕಾಲ ಇರುತ್ತದೆ. ಹೀಗಾಗಿಯೇ ಕಯಾಕಿಂಗ್‌ಗೆ ಇದು ಪ್ರಶಸ್ತ ಸ್ಥಳವಾಗಿದ್ದು, ಪ್ರತಿ ವರ್ಷ ಇಂಥ ಉತ್ಸವ ಹಾಗೂ ನಿರಂತರವಾಗಿ ಈ ಚಟುವಟಿಕೆ ನಡೆಯಲು ಶಾಶ್ವತ ವ್ಯವಸ್ಥೆ ಕಲ್ಪಿಸಲಾಗುವುದು’

ಪ್ರತಿಷ್ಠಿತ ಒಲಿಂಪಿಕ್‍ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದ್ದು, ಸುಮಾರು 1,000 ಮಂದಿಯನ್ನು ದತ್ತು ಸ್ವೀಕರಿಸಿ ಅವರಿಗೆ ಎಲ್ಲ ರೀತಿಯ ಸಹಕಾರ ಹಾಗೂ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

Posted 2 years ago in POLITICS